Skip to content
GullySales

ಬೆಂಗಳೂರು · ಮಾರಾಟ ಮತ್ತು ಮಾರ್ಕೆಟಿಂಗ್

ವಿಚಾರಣೆಗಳು ಆರ್ಡರ್‌ಗಳಾಗಿ ಬದಲಾಗುವಂತೆ ಮಾಡಿ.

GullySales ಬೆಂಗಳೂರಿನ ಮಾರಾಟ ಮತ್ತು ಮಾರ್ಕೆಟಿಂಗ್ ಸಂಸ್ಥೆ. ನಿಮ್ಮ ವ್ಯವಹಾರಕ್ಕೆ ಬರುವ ವಿಚಾರಣೆಗಳಿಗೆ ಎಷ್ಟು ಬೇಗ ಉತ್ತರ ಹೋಗುತ್ತದೆ, ಫಾಲೋ-ಅಪ್ ಹೇಗೆ ನಡೆಯುತ್ತದೆ ಮತ್ತು ಎಷ್ಟು ಆರ್ಡರ್ ಆಗುತ್ತದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ.

Colleagues arrange a sequence of planning notes beside a laptop

ಉಚಿತ ಆಡಿಟ್ ಎಂದರೆ 90 ನಿಮಿಷಗಳ ಕರೆ. ನಿಮ್ಮ ಇತ್ತೀಚಿನ ವಿಚಾರಣೆಗಳನ್ನು ಆರು ಅಂಶಗಳಲ್ಲಿ ಪರಿಶೀಲಿಸಿ, ಅಂಕ ನೀಡಿದ ಲಿಖಿತ ವರದಿಯನ್ನು ಕೊಡುತ್ತೇವೆ.

ನಾವು ಪರಿಶೀಲಿಸುವ ಆರು ಅಂಶಗಳು

ವಿಚಾರಣೆ ಆರ್ಡರ್ ಆಗುವ ಮೊದಲು ಆರು ಕಡೆ ಕಳೆದುಹೋಗಬಹುದು.

  1. 1

    ವಿಚಾರಣೆಗಳು ಹೇಗೆ ಬರುತ್ತವೆ

    ಗೂಗಲ್, ಫೋನ್, ವಾಟ್ಸಾಪ್, ವೆಬ್‌ಸೈಟ್: ಯಾವ ದಾರಿಯಿಂದ ಎಷ್ಟು ವಿಚಾರಣೆಗಳು ಬರುತ್ತವೆ ಎಂದು ಲೆಕ್ಕ ಹಾಕುತ್ತೇವೆ.

  2. 2

    ಎಷ್ಟು ಬೇಗ ಉತ್ತರ ಹೋಗುತ್ತದೆ

    ವಿಚಾರಣೆಗೆ ಯಾರು ಉತ್ತರಿಸುತ್ತಾರೆ, ಮತ್ತು ಗ್ರಾಹಕರು ಎಷ್ಟು ಹೊತ್ತು ಕಾಯುತ್ತಾರೆ ಎಂದು ನೋಡುತ್ತೇವೆ.

  3. 3

    ಯಾವ ವಿಚಾರಣೆಗಳು ನಿಜವಾದ ಗ್ರಾಹಕರು

    ಖರೀದಿಸಬಲ್ಲವರ ವಿಚಾರಣೆಗಳನ್ನು ಬೇರ್ಪಡಿಸಿ, ತಪ್ಪು ವಿಚಾರಣೆಗಳು ಎಲ್ಲಿಂದ ಬರುತ್ತವೆ ಎಂದು ಹುಡುಕುತ್ತೇವೆ.

  4. 4

    ಎಷ್ಟು ಬಾರಿ ಫಾಲೋ-ಅಪ್ ಆಗುತ್ತದೆ

    ಕೊಟೇಶನ್ ಕೊಟ್ಟ ನಂತರ ಏನಾಗುತ್ತದೆ ಮತ್ತು ಮೌನವಾದ ವಿಚಾರಣೆಗಳಿಗೆ ಎಷ್ಟು ಸಲ ಮತ್ತೆ ಸಂಪರ್ಕಿಸುತ್ತಾರೆ ಎಂದು ನೋಡುತ್ತೇವೆ.

  5. 5

    ಮಾರ್ಕೆಟಿಂಗ್‌ನಿಂದ ಸೇಲ್ಸ್‌ಗೆ ಹಸ್ತಾಂತರ

    ವಿಚಾರಣೆ ಮಾರ್ಕೆಟಿಂಗ್‌ನಿಂದ ಸೇಲ್ಸ್‌ಗೆ ಹೋದ ಕ್ಷಣದಿಂದ ಅದಕ್ಕೆ ಯಾರು ಹೊಣೆ ಎಂದು ಪರಿಶೀಲಿಸುತ್ತೇವೆ.

  6. 6

    CRM ವಿಶ್ವಾಸಾರ್ಹವೇ

    CRM ನಲ್ಲಿ ಇರುವ ಮಾಹಿತಿ ನಿಜವಾಗಿ ನಡೆದದ್ದಕ್ಕೆ ಹೊಂದುತ್ತದೆಯೇ ಎಂದು ತಾಳೆ ನೋಡುತ್ತೇವೆ.

ಪ್ರತಿ ಅಂಶಕ್ಕೆ 1 ರಿಂದ 5 ಅಂಕ ನೀಡುತ್ತೇವೆ. ಅಂಕ ನೀಡುವ ವಿಧಾನ (ಇಂಗ್ಲಿಷ್‌ನಲ್ಲಿ).

ಪ್ರಶ್ನೆಗಳು

ಉಚಿತ ಆಡಿಟ್ ಬಗ್ಗೆ ಪ್ರಶ್ನೆಗಳು.

ಆಡಿಟ್ ಉಚಿತವೇ?
ಹೌದು. ಇದು 90 ನಿಮಿಷಗಳ ಕರೆ ಮತ್ತು ಲಿಖಿತ, ಅಂಕ ನೀಡಿದ ವರದಿ. ಇದಕ್ಕೆ ಬಿಲ್ ಇಲ್ಲ, ಬಾಧ್ಯತೆಯೂ ಇಲ್ಲ.
ಆಡಿಟ್‌ಗೆ ನಾನು ಏನು ಸಿದ್ಧಪಡಿಸಬೇಕು?
ಇತ್ತೀಚಿನ ವಿಚಾರಣೆಗಳ ಪಟ್ಟಿ (ಫೋನ್ ಕರೆ, ವಾಟ್ಸಾಪ್, ಫಾರ್ಮ್) ಮತ್ತು ಇದ್ದರೆ ಕೊಟೇಶನ್‌ಗಳು. ಎಲ್ಲವೂ ಇಲ್ಲದಿದ್ದರೂ ಪರವಾಗಿಲ್ಲ; ಇರುವುದರಿಂದಲೇ ಆರಂಭಿಸಬಹುದು.
ಆಡಿಟ್ ಆದ ನಂತರ ಏನು ಸಿಗುತ್ತದೆ?
ಆರು ಅಂಶಗಳ ಲಿಖಿತ ವರದಿ: ಪ್ರತಿ ಅಂಶಕ್ಕೆ ಅಂಕ, ಏನು ಕಂಡಿತು ಎಂಬ ವಿವರ, ಮತ್ತು ಮೊದಲು ಮಾಡಬೇಕಾದ ಒಂದು ಕೆಲಸ. ನಮ್ಮೊಂದಿಗೆ ಮುಂದುವರಿಯಬೇಕೆಂದು ಯಾವುದೇ ಒತ್ತಡ ಇಲ್ಲ.

ನಿಮ್ಮ ಮುಂದಿನ ಹೆಜ್ಜೆ

ಮಾತನಾಡೋಣ.

ಫೋನ್ ಅಥವಾ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ. 90 ನಿಮಿಷಗಳ ಉಚಿತ ಆಡಿಟ್, ಲಿಖಿತ ವರದಿ, ಬಿಲ್ ಇಲ್ಲ, ಬಾಧ್ಯತೆ ಇಲ್ಲ.